ಹುದ್ದೆಯ ಹೆಸರು:ಆಧಾರ್ ಮೇಲ್ವಿಚಾರಕ / ಆಪರೇಟರ್ – ಜಿಲ್ಲಾ ಮಟ್ಟ
ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 31-01-2026
| ಜಿಲ್ಲೆ | ಖಾಲಿ ಹುದ್ದೆಗಳ ಸಂಖ್ಯೆ |
| ಬೆಂಗಳೂರು ಗ್ರಾಮಾಂತರ | 1 |
| ಚಾಮರಾಜನಗರ | 1 |
| ಹಾವೇರಿ | 1 |
| ಕೋಲಾರ | 1 |
| ಮಂಡ್ಯ | 1 |
| ಉಡುಪಿ | 1 |
| ಬಾಗಲಕೋಟೆ | 1 |
| ವಿಜಯಪುರ | 1 |
| ಕಲಬುರಗಿ | 1 |
| ಬೆಳಗಾವಿ | 1 |
CSC e-Governance Services India Ltd. ಅಡಿಯಲ್ಲಿ ಇರುವ ಆಧಾರ್ ಸೇವಾ ಕೇಂದ್ರ (ASK) ಗಳಿಗೆ ಆಧಾರ್ ಆಪರೇಟರ್ / ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತಾ ಮಾನದಂಡಗಳು:
ಕನಿಷ್ಠ ವಯಸ್ಸು: 18 ವರ್ಷಗಳು ಅಥವಾ ಅದಕ್ಕಿಂತ ಮೇಲ್ಪಟ್ಟವರು
ಶೈಕ್ಷಣಿಕ ಅರ್ಹತೆ (ಯಾವುದಾದರೂ ಒಂದು):
12ನೇ ತರಗತಿ (ಇಂಟರ್ಮೀಡಿಯೇಟ್ / ಸೀನಿಯರ್ ಸೆಕೆಂಡರಿ)
ಅಥವಾ
ಮೆಟ್ರಿಕ್ಯುಲೇಶನ್(SSLC) + 2 ವರ್ಷಗಳ ಐಟಿಐ (ITI)
ಅಥವಾ
ಮೆಟ್ರಿಕ್ಯುಲೇಶನ್(SSLC) + 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ
ವೇತನ / ಗೌರವಧನ::ಸಂಬಂಧಿತ ರಾಜ್ಯದಲ್ಲಿ ಅರ್ಧ-ನಿಪುಣ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ವೇತನ ಅನ್ವಯವಾಗುತ್ತದೆ
ಇತರೆ ನಿಯಮಗಳು ಮತ್ತು ಷರತ್ತುಗಳು;
UIDAI ವತಿಯಿಂದ ಅನುಮೋದಿತ ಟೆಸ್ಟಿಂಗ್ ಮತ್ತು ಪ್ರಮಾಣೀಕರಣ ಸಂಸ್ಥೆ ನೀಡಿದ ಆಧಾರ್ ಆಪರೇಟರ್ / ಮೇಲ್ವಿಚಾರಕ ಪ್ರಮಾಣಪತ್ರ ಹೊಂದಿರಬೇಕು
ಮೂಲಭೂತ ಕಂಪ್ಯೂಟರ್ ಜ್ಞಾನ ಇರಬೇಕು
ನೀವು ಆಧಾರ್ ಮೇಲ್ವಿಚಾರಕ ಪರೀಕ್ಷೆಯನ್ನು ಕೆಳಗಿನ ಲಿಂಕ್ ಮೂಲಕ ಬರೆಯಬಹುದು:👉 https://uidai.nseitexams.com/UIDAI/LoginAction_input.action
ಪರೀಕ್ಷೆಗೆ ಅರ್ಜಿ ಸಲ್ಲಿಸಿದ ನಂತರ, ರಾಜ್ಯ ತಂಡಕ್ಕೆ ಅನುಮೋದನಾ ವಿನಂತಿ ಕಳುಹಿಸಲಾಗುತ್ತದೆ.
ರಾಜ್ಯ ತಂಡ ಅನುಮೋದಿಸಿದ ಬಳಿಕ ಮಾತ್ರ ನೀವು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ.
ನಿಮ್ಮ LMS ಐಡಿ ಮತ್ತು ಪಾಸ್ವರ್ಡ್ ರಚನೆ ಹಾಗೂ ಅನುಮೋದನೆಯ ನಂತರ, ನೀವು ಆಧಾರ್ LMS ಪ್ರಮಾಣಪತ್ರ ಪರೀಕ್ಷೆ ಬರೆಯಬಹುದು.
ಲಿಂಕ್: 👉 https://e-learning.uidai.gov.in
ವಿಶೇಷ ಸೂಚನೆ:VLEಗಳು (Village Level Entrepreneurs) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.